ಧಾರವಾಡ:ಮನೆಯಲ್ಲಿ ಆಟವಾಡುತ್ತಾ ಆಕಸ್ಮಿಕವಾಗಿ ಒಂದು ರೂಪಾಯಿ ನಾಣ್ಯವನ್ನು ಬಾಯಿಗೆ ಹಾಕಿಕೊಂಡಿದ್ದರಿಂದ ಗಂಟಲಿನಲ್ಲಿ ಸಿಲುಕಿ 2 ವರ್ಷದ ಮಗು ಮೃತಪಟ್ಟಿರುವ ಘಟನೆ ನಗರದ ಕೋಳಿಕೇರಿ ಬಡಾವಣೆಯಲ್ಲಿ ನಡೆದಿದೆ.
ಮೃತ ಮಗುವನ್ನು ನಗರದ ಕೋಳಿಕೇರಿ ಬಡಾವಣೆಯ ಮಹ್ಮದ ಜುಬೇರ್ ಸಾಲಿ (2) ಎಂದು ತಿಳಿದು ಬಂದಿದೆ.
ಮಗು. ಆಟವಾಡುತ್ತಿದ್ದಾಗ ಬಾಯಿಯಲ್ಲಿ ಒಂದು ರೂಪಾಯಿ ನಾಣ್ಯ ಹಾಕಿಕೊಂಡಿದೆ. ಅದು ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ಮಗು ಒದ್ದಾಡುತ್ತಿದ್ದದ್ದನ್ನು ಕಂಡು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ತುಳುನಾಡ ಸೂರ್ಯ ಮಕ್ಕಳ ಹೆತ್ತವರಲ್ಲಿ ವಿನಂತಿಸುತ್ತಿದೆ.