ತುಳುಕೂಟ ಉಡುಪಿ ವತಿಯಿಂದ 22 ನೇ ವರ್ಷದ ಕೆಮ್ಟೂರು ದೊಡ್ಡಣ್ಣ ಶೆಟ್ಟರ ನೆನಪಿನ ತುಳು ನಾಟಕ ಕಾರ್ಯಕ್ರಮ ಜನವರಿ 7 ರಿಂದ 13ರ ವರೆಗೆ ಪ್ರತಿದಿನ ಸಂಜೆ 6.30 ಕ್ಕೆ ಮುದ್ದಣ ಮಂಟಪ, ಎಂ.ಜಿ.ಎಂ ಕಾಲೇಜು ಉಡುಪಿಯಲ್ಲಿ ನಡೆಯಲಿದೆ.
ಜನವರಿ 7 ರಂದು ಸಂಜೆ 5 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್,ರಜತ ಮಹೋತ್ಸವ ಸಮಿತಿ ತುಳುಕೂಟ ಪುಣೆ ಇದರ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು,ಉಡುಪಿ ಕನ್ನಡ ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಇವರು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುಕೂಟ ಉಡುಪಿ ಇದರ ಅಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ ವಹಿಸಲಿದ್ದಾರೆ.