ಚಿಕ್ಕಮಗಳೂರು: ಮೂರು ದಶಕಗಳ ಹಿಂದೆ ಬಾಬರಿ ಧ್ವಂಸ ಸಂದರ್ಭ ಹುಬ್ಬಳ್ಳಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಶ್ರೀಕಾಂತ್ ಪೂಜಾರಿ ಎಂಬಾತನನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಮಾಜಿ ಸಚಿವ ಸಿ.ಟಿ.ರವಿ ‘ನಾನೂ ಕರಸೇವಕ, ನನ್ನನ್ನು ಬಂಧಿಸಿ’ ಎಂದು ಬರೆದಿರುವ ಭಿತ್ತಿಪತ್ರ ಹಿಡಿದು ಗುರುವಾರ ಚಿಕ್ಕಮಗಳೂರು ನಗರ ಠಾಣೆ ಎದುರು ಏಕಾಂಗಿ ಧರಣಿ ನಡೆಸಿದರು.
ಕೆಲವು ಕಾರ್ಯಕರ್ತರೊಂದಿಗೆ ಆಗಮಿ ಸಿದ ಅವರು ಪೊಲೀಸ್ ಠಾಣೆಯ ಮುಂಭಾಗ ‘ನಾನು ಕ್ರಿ.ಶ.1992 ಡಿ.6ರ ಅಯೋಧ್ಯೆ ಶ್ರೀರಾಮ ಮಂದಿರದ ಕರಸೇವಕ, ನನ್ನನ್ನೂ ಬಂಧಿಸಿ’ ಎಂಬ ಭಿತ್ತಿಪತ್ರವನ್ನು ಹಿಡಿದು ನಗರ ಪೊಲೀಸ್ ಠಾಣೆ ಮುಂಭಾಗ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು. ಠಾಣೆಯ ಗೇಟ್ ಆವರಣದಲ್ಲಿದ್ದ ಕಾರ್ಯಕರ್ತರು ಸಿ.ಟಿ.ರವಿ ಪ್ರತಿಭಟನೆಗೆ ಸಾಥ್ ನೀಡಿದರು.
ಈ ವೇಳೆ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ಹೆಚ್ಚುವರಿ ಎಸ್ಪಿ ಕೃಷ್ಣ ಮೂರ್ತಿಯವರು ಸಿ.ಟಿ.ರವಿಯನ್ನು ಪೋಲಿಸ್ ಠಾಣೆ ಒಳಗೆ ಕರೆದುಕೊಂಡು ಹೋದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ನಾವೂ ಕರ ಸೇವಕರು, ನಮ್ಮನ್ನು ಬಂಧಿಸಿ ಎಂದು ಠಾಣೆಗೆ ಮುತ್ತಿಗೆ ಹಾಕಲು ಮುಂದಾದರು. ಈ ಸಂದರ್ಭ ಬಿಜೆಪಿ ಕಾರ್ಯಕ ರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆಯಿತು. ನಂತರ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಠಾಣೆಯ ಆವರಣದಿಂದ ಹೊರಗೆ ಕಳಿಸಿದರು.
Trending
- ಏಕ ನಿವೇಶನ ಪರವನಿಗೆ ಕೋರಿ ಸಲ್ಲಿಸಿದ ಅರ್ಜಿಯ ತ್ವರಿತ ವಿಲೇವಾರಿಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳುವಂತೆ ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಿಗೆ ತುಳುನಾಡ್ ರಕ್ಷಣಾ ವೇದಿಕೆ ಮನವಿ
- ಪೂಜಾರಿ ಹಾದಿಯಲ್ಲಿ ಸಾಗುವೆ; ಅಭಿವೃದ್ಧಿ ಪರ, ಸೌಹಾರ್ದ ದಕ್ಷಿಣ ಕನ್ನಡ ನನ್ನ ಕನಸು: ದ.ಕ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್
- ಬೆಂಗಳೂರು ; 5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಆದೇಶ
- ಸಂತೆಕಟ್ಟೆ ಉಡುಪಿ ರಾಷ್ಟ್ರೀಯ ಹೆದ್ದಾರಿಯ ರಸ್ತೆ ದುರಸ್ತಿ ತುಳುನಾಡ ರಕ್ಷಣಾ ವೇದಿಕೆ ಆಗ್ರಹ
- 21/03/2024.ಮಧ್ಯಾಹ್ನ 3.30ಕ್ಕೆ ಲೋಕಸಭಾ ಚುನಾವಣೆ ಸ್ಪರ್ಧೆ ಹಿನ್ನೆಲೆ ಮೊಹಿದ್ದಿನ್ ಬಾವಾ ಅಭಿಮಾನಿಗಳು ಮತ್ತು ಹಿತೈಷಿಗಳ ಸಮಾಲೋಚನಾ ಸಭೆ
- ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಹಮೀದ್ ಹಸನ್ ಮಾಡೂರ್
- ತಲಪಾಡಿ: ರಾಜೇಶ್ ಶೆಟ್ಟಿ ಯವರಿಗೆ ಬೈಕ್ ಢಿಕ್ಕಿ|ಮೃತ್ಯು. ತಲಪಾಡಿ ಪರಿಸರದಲ್ಲಿ ತೀವ್ರ ಶೋಕ.
- ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಬುಡ್ಲೆಗುತ್ತು