ಬಜಪೆ: 2024ನೇ ಸಾಲಿನ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ರಾಷ್ಟ್ರಪತಿಯವರ ಸೇವಾ ಪದಕವು ಬಜಪೆ ಪೊಲೀಸ್ ಠಾಣೆಯ ಎ ಎಸ್ ಐ ರಾಮ ಪೂಜಾರಿ ಅವರಿಗೆ ಲಭಿಸಿದೆ. ರಾಮ ಪೂಜಾರಿಯವರು ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಪದಕ ಬಂದಿದ್ದು, ಇವರು 10 -11- 1993 ರಂದು ಪೊಲೀಸ್ ಇಲಾಖೆಗೆ ಸೇರಿದ್ದು, ಕಾರವಾರ ಪಿ.ಟಿ.ಎಸ್. ನಲ್ಲಿ ಮೂಲ ತರಬೇತಿ ಪಡೆದು, ಮಂಗಳೂರಿನಿಂದ ಕಾರವಾರಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್ ನಲ್ಲಿ ಹೋಗುವಾಗ ಹೊನ್ನಾವರದ ಬಾರ್ಜ್ ನಲ್ಲಿ ನೀರಿನಲ್ಲಿ ಬಸ್ ಮುಳುಗಿ ಅದರಲ್ಲಿ ಸುಮಾರು 25 ಜನರ ಪ್ರಾಣವನ್ನು ಆರು ಜನ ಪೊಲೀಸರ ತಂಡ ರಕ್ಷಣೆ ಮಾಡಿದ ಕೀರ್ತಿ ಇವರದ್ದಾಗಿರುತ್ತದೆ. ಬ್ರಹ್ಮಾವರ, ಸುಳ್ಯ, ಎಸ್.ಪಿ. ವಿಶೇಷ ಪತ್ತೆ ದಳ. ಮೂಡಬಿದ್ರೆ. ಮುಲ್ಕಿ, ಮಂಗಳೂರು ಸಿ.ಸಿ.ಬಿ. ಘಟಕ ದಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಬಜಪೆ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಪರಾಧ ಪತ್ತೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದು, 30 ವರ್ಷದ ಸೇವಾ ಅವಧಿಯಲ್ಲಿ 35 ಕೊಲೆ ಪ್ರಕರಣ, ಭೇದಿಸಿ ಪತ್ತೆ ಮಾಡಿರುತ್ತಾರೆ. ಅಲ್ಲದೇ ಕುಖ್ಯಾತ ಭೂಗತ ಪಾತಕಿಗಳು, ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದನೆ ಸಂಘಟನೆಯ ಭಯೋತ್ಪಾದಕರನ್ನು ಮಂಗಳೂರು, ಬೆಂಗಳೂರು, ಮುಂಬೈ ಮೂಲದ ಭೂಗತ ಪಾತಕಿಗಳ ಹಾಗೂ ಭೂಗತ ಜಗತ್ತಿನ ಅನೇಕ ಕ್ರಿಮಿನಲ್ ಗಳನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ರಾಷ್ಟ್ರ ವ್ಯಾಪ್ತಿಯಲ್ಲಿ ಪ್ರಚಾರವಾದಂತಹ ಮೂಡಬಿದ್ರಿ ಜೈನ ಬಸದಿಯ ಪ್ರಕರಣದ ಪ್ರಮುಖ ಆರೋಪಿಗಳನ್ನು ಪತ್ತೆ ಹಾಗೂ ಹಲವಾರು ಘೋರವರಾದ ಪ್ರಕರಣಗಳನ್ನು, ಹಾಗೂ ಹೆಂಗಸರ ಕುತ್ತಿಗೆಯಿಂದ ಸರ ದರೋಡೆ, ಮತ್ತು ಮನೆ ಕಳ್ಳತನ, ಅತ್ಯಾಚಾರ ಪ್ರಕರಣ ಆರೋಪಿತರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ರಾಮ ಪೂಜಾರಿಯವರು ಅತ್ಯುತ್ತಮ ಕೆಚ್ಚೆದೆಯ, ಸಮರ್ಪಕ, ಕ್ರಿಯಾತ್ಮಕ ಸಿಬ್ಬಂದಿಯಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ಅತ್ಯುತ್ತಮ ವೃತ್ತಿಪರ ಜ್ಞಾನವನ್ನು ಹೊಂದಿರುತ್ತಾರೆ.ಸಾರ್ವಜನಿಕ ಮತ್ತು ವಿವಿಧ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿರುತ್ತಾರೆ.ಅಲ್ಲದೇ ಪೊಲೀಸ್ ಇಲಾಖೆಯಲ್ಲಿ ಮೇಲಾಧಿಕಾರಿವರೊಂದಿಗೆ ಉತ್ತಮ ಗೌರವದಿಂದ ನಡೆದುಕೊಂಡಿದ್ದು, ಇವರು 2014 ನೇ ಇಸವಿಯಲ್ಲಿ ಮಾನ್ಯ ಕರ್ನಾಟಕ ರಾಜ್ಯ ಮುಖ್ಯ ಮಂತ್ರಿಯವರ ಗೌರವಯುತ ಚಿನ್ನದ ಪದಕವನ್ನು ಪಡೆದುಕೊಂಡಿರುತ್ತಾರೆ. ಇಲಾಖೆಯಲ್ಲಿ ಅನೇಕ ಪ್ರಶಂಸನ ಪತ್ರ ಮತ್ತು ನಗದು ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ. ಈ ಹಿಂದೆ ದಯಾನಂದ, ಐ.ಪಿ.ಎಸ್. ಜಯಂತ್ ವಿ. ಶೆಟ್ಟಿ. ಭಾಸ್ಕರ್ ರೈ. ವಿಶ್ವನಾಥ್ ಪಂಡಿತ್, ಗಂಗಿ ರೆಡ್ಡಿ, ಕೋದಂಡ ರಾಮ್. ವೆಲೆಂಟೈನ್ ಡಿ’ಸೋಜ, ಮಹೇಶ್ ಕುಮಾರ್,ಪ್ರಕಾಶ್, ಸುನಿಲ್ ನಾಯಕ್, ಪ್ರಮೋದ್ ಕುಮಾರ್. ರಾಜೇಂದ್ರ ಡಿ.ಎಸ್., ಶಾಂತರಾಮ್, ಶ್ಯಾಮ್ ಸುಂದರ್. ಕೆ.ಆರ್.ನಾಯಕ್. ಸಂದೇಶ್ ಇವರೊಂದಿಗೆ ಕೆಲಸ ಮಾಡಿದ ಉತ್ತಮ ಅನುಭವ ಹೊಂದಿರುತ್ತಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ಐ.ಪಿ.ಎಸ್ , ಡಿ.ಸಿ.ಪಿ. ಸಿದ್ದಾರ್ಥ ಗೋಯಲ್, (ಕಾ. ಮತ್ತು ಸು.), ದಿನೇಶ್ ಕುಮಾರ್, ಅಪರಾಧ ಮತ್ತು ಸಂಚಾರ, ಹಾಗೂ ಮನೋಜ್ ಕುಮಾರ್, ಎ.ಸಿ.ಪಿ., ಉತ್ತರ ಉಪ ವಿಭಾಗ, ಪಣಂಬೂರು ಮತ್ತು ಬಜಪೆ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್. ಇವರ ಅನುಮೋದನೆಯಿಂದ ಇವರು ರಾಷ್ಟ್ರಪತಿಯವರ ಶ್ಲಾಘನಿಯ ಪದಕ ಪಡೆದಿರುತ್ತಾರೆ.
Trending
- ಏಕ ನಿವೇಶನ ಪರವನಿಗೆ ಕೋರಿ ಸಲ್ಲಿಸಿದ ಅರ್ಜಿಯ ತ್ವರಿತ ವಿಲೇವಾರಿಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳುವಂತೆ ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಿಗೆ ತುಳುನಾಡ್ ರಕ್ಷಣಾ ವೇದಿಕೆ ಮನವಿ
- ಪೂಜಾರಿ ಹಾದಿಯಲ್ಲಿ ಸಾಗುವೆ; ಅಭಿವೃದ್ಧಿ ಪರ, ಸೌಹಾರ್ದ ದಕ್ಷಿಣ ಕನ್ನಡ ನನ್ನ ಕನಸು: ದ.ಕ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್
- ಬೆಂಗಳೂರು ; 5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಆದೇಶ
- ಸಂತೆಕಟ್ಟೆ ಉಡುಪಿ ರಾಷ್ಟ್ರೀಯ ಹೆದ್ದಾರಿಯ ರಸ್ತೆ ದುರಸ್ತಿ ತುಳುನಾಡ ರಕ್ಷಣಾ ವೇದಿಕೆ ಆಗ್ರಹ
- 21/03/2024.ಮಧ್ಯಾಹ್ನ 3.30ಕ್ಕೆ ಲೋಕಸಭಾ ಚುನಾವಣೆ ಸ್ಪರ್ಧೆ ಹಿನ್ನೆಲೆ ಮೊಹಿದ್ದಿನ್ ಬಾವಾ ಅಭಿಮಾನಿಗಳು ಮತ್ತು ಹಿತೈಷಿಗಳ ಸಮಾಲೋಚನಾ ಸಭೆ
- ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಹಮೀದ್ ಹಸನ್ ಮಾಡೂರ್
- ತಲಪಾಡಿ: ರಾಜೇಶ್ ಶೆಟ್ಟಿ ಯವರಿಗೆ ಬೈಕ್ ಢಿಕ್ಕಿ|ಮೃತ್ಯು. ತಲಪಾಡಿ ಪರಿಸರದಲ್ಲಿ ತೀವ್ರ ಶೋಕ.
- ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಬುಡ್ಲೆಗುತ್ತು