Author: curiouslabs

ಬಂಟ್ವಾಳ:ನಾಲ್ವರು ಮುಸುಕುದಾರಿಗಳು ಮನೆಯೊಂದರಲ್ಲಿ ತಾಯಿ ಮಗಳಿಗೆ ಚೂರಿ ತೋರಿಸಿ ಲಕ್ಷಾಂತರ ರೂ ನಗನಗದನ್ನು ರಾಬರಿ ಮಾಡಿದ ಘಟನೆ ಇಂದು ಬೆಳಂಬೆಳಿಗ್ಗೆ ವಗ್ಗದಲ್ಲಿ ನಡೆದಿದೆ. ವಗ್ಗ ಸಮೀಪದ ಅಂಚಿಕಟ್ಟೆ ಸಾಲುಮರ ತಿಮ್ಮಕ್ಕನ ಟ್ರೀ ಪಾರ್ಕ್ ಮುಂಭಾಗದಲ್ಲಿ ರುವ ಪ್ಲೋರಿನ್ ಪಿಂಟೋ ಅವರ ಹೊಸ ಮನೆಯಿಂದ ರಾಬರಿ ಮಾಡಲಾಗಿದೆ.ಮನೆಯಲ್ಲಿ ತಾಯಿ ಪ್ಲೋರಿನಾ ಪಿಂಟೊ ಮಗಳು ಮರಿನಾ ಪಿಂಟೋ ಇಬ್ಬರು ಮಾತ್ರ ಇದ್ದು ಗಂಡಸರಿಲ್ಲದ ಮನೆಯಿಂದ ರಾಬರಿ ನಡೆಸಲಾಗಿದೆ. ಗೊದ್ರೇಜ್ ನಲ್ಲಿರಿಸಲಾಗಿದ್ದ ಸುಮಾರು 2.90 ಲಕ್ಷ ರೂಮೌಲ್ಯದ ವಿವಿಧ ಬಂಗಾರಗಳು, 30 ಸಾವಿರನಗದು ಹಾಗೂ ಒಂದು ಮೊಬೈಲ್ ಪೋನ್ ಒಟ್ಟು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ನಗನಗದು ರಾಬರಿ ಮಾಡಿದ್ದಾರೆ.ಇಂದು ಬೆಳಿಗ್ಗೆ ಸುಮಾರು 6.30 ರ ಸಮಯದಲ್ಲಿ ಬೆಲ್ ಹಾಕಿದಾಗ ಬಾಗಿಲು ತೆಗದು ನೋಡಿದಾಗ ನಾಲ್ವರು ಮುಸುಕುದಾರಿಗಳು ಮನೆಯೊಳಗೆ ನುಗ್ಗಿದ್ದಾರೆ.ಬಳಿಕ ಮನೆಯಲ್ಲಿರುವ ನಗನಗದು ಕೊಡುವಂತೆ ಬೆದರಿಸಿದ್ದಾರೆ.ಬೆದರಿಕೆಗೆ ಬಗ್ಗದಾಗ ನಾಲ್ವರು ಕೈಯಲ್ಲಿ ಚೂರಿ ತೋರಿಸಿ ಕೊಲ್ಲುವ ಬೆದರಿಕೆಒಡ್ಡಿದಾಗ ಗೊದ್ರೇಜ್ ನಬೀಗದ ಕೀ ನೀಡಿದ್ದಾರೆ.ಬಂಗಾರವನ್ನು ದೋಚುವ ವೇಳೆ ಅಡ್ಡ…

Read More

ಮಣಿಪಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಂಜಾ ಸೇವನೆ ಮಾಡಿದ ಕೇರಳ ಮೂಲದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈಶ್ವರನಗರ ರೆಸ್ಟೋರೆಂಟ್ ಒಂದರ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ಕೇರಳ ನಿವಾಸಿಗಳಾದ ಅಕ್ಷಯ್ (18), ಮೊಹಮ್ಮದ್ ಅಫ್ರಾನ್ (19) ಆರೋಪಿಗಳು. ಆರೋಪಿಗಳನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಸೇನೆಯಲ್ಲಿ ನರ್ಸಿಂಗ್‌ ಸೇವೆಗೆ ಮಹಿಳೆಯರಿಗೆ ಮಾತ್ರ ಅವಕಾಶ ಕಲ್ಪಿಸಿದ್ದ ಭಾರತೀಯ ಮಿಲಟರಿ ನರ್ಸಿಂಗ್‌ ಸೇವೆಗಳ ಸುಗ್ರೀವಾಜ್ಞೆ 1943ರ ಸೆಕ್ಷನ್ 6 ರಲ್ಲಿದ್ದ ‘ಮಹಿಳೆಯಾಗಿದ್ದರೆ’ ಎಂಬ ಪದವನ್ನು ಅಸಾಂವಿಧಾನಿಕ ಎಂದು ಹೈಕೊರ್ಟ್ ಘೋಷಣೆ ಮಾಡಿದೆ. ಈ ರೀತಿಯ ಮೀಸಲಾತಿ ನೀಡುವುದು ಸಂವಿಧಾನದ ಪರಿಚ್ಛೇದ 14(ಸಮಾನತೆ), 16(2) (ಲಿಂಗ ತಾರತಮ್ಯ) ಹಾಗೂ 21 (ಜೀವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಕ್ಕು) ಉಲ್ಲಂಘಿಸಿದಂತಾಗಲಿದೆ ಎಂದು ಧಾರವಾಡ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟು, 81 ವರ್ಷಗಳ ಹಳೆಯ ಕಾನೂನನ್ನು ರದ್ದುಗೊಳಿಸಿ ಆದೇಶಿಸಿದೆ. ಹುಬ್ಬಳ್ಳಿಯ ಕೆಎಲ್‌ಇ ನರ್ಸಿಂಗ್ ಸಂಸ್ಥೆಯ ಪ್ರಾಂಶುಪಾಲ ಹಾಗೂ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸಂಜಯ್ ಎಂ ಪೀರಾಪುರ, ಕರ್ನಾಟಕ ಶುಶೂಷಕರ ಸಂಘ ಮತ್ತಿತರರು ಸಲ್ಲಿಸಿದ್ದ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಧಾರವಾಡದ ನ್ಯಾಯಪೀಠ ಈ ಆದೇಶ ನೀಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು1943ರಲ್ಲಿ ಸುಗ್ರೀವಾಜ್ಞೆಯನ್ನು ಜಾರಿ ಮಾಡಿದ್ದರು. ಅದನ್ನು ಸಂವಿಧಾನದ ಅಡಿಯಲ್ಲಿ ಅಳವಡಿಸಿಕೊಂಡು ರಾಷ್ಟ್ರಪತಿಗಳು ಒಪ್ಪಿಗೆ ನೀಡಿದ್ದಾರೆ. ಆದರೆ, ಈ ಕಾನೂನು…

Read More

ಮಂಗಳೂರು : ನಗರದ ಕಾರ್ ಸ್ಟ್ರೀಟ್‌ನ ಕ್ರಾಸ್ ರಸ್ತೆಯಲ್ಲಿರುವ ಪ್ರಗತಿ ಜ್ಯುವೆಲ್ಲರ್ಸ್‌ಗೆ ಗ್ರಾಹಕರ ಸೋಗಿನಲ್ಲಿ ಬಂದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲದ ಮಂಜನಾಡಿಯ ಊರುಮನೆ ನಿವಾಸಿ ಮಹಮ್ಮದ್ ಸಿನಾನ್(25), ನಾಟೆಕಲ್ ನಿವಾಸಿ‌ ಹೈದರ್ ಆಲಿ ಆಸಿಲ್(20), ನಾಟೆಕಲ್‌ನ ಅಸೈಗೋಳಿ ನಿವಾಸಿ‌ ಮೊಹಮ್ಮದ್ ತಸ್ವೀರ್(34) ಬಂಧಿತ ಆರೋಪಿಗಳು. ಜ್ಯುವೆಲ್ಲರಿ ಶಾಪ್‌ನ ಸಿಬ್ಬಂದಿ ಗಮನ ಬೇರೆಡೆಗೆ ಸೆಳೆದು 97.11 ಗ್ರಾಂ ತೂಕದ 6,00,000 ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಪ್ರಗತಿ ಜ್ಯುವೆಲ್ಲರ್ಸ್ ಮಾಲೀಕ ವಿನೋದ್ ಶೇಟ್ ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ, ಮಂಗಳೂರು ಕೇಂದ್ರ ಮಾರುಕಟ್ಟೆ ಪರಿಸರದಲ್ಲಿ ಆರೋಪಿಗಳನ್ನು ಬಂಧಿಸಿ 6,00,000 ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿರುವ ಸ್ಕೂಟರ್, 2 ಮೊಬೈಲ್‌ ಫೋನ್ ಗಳು ವಶಪಡಿಸಿಕೊಂಡಿದ್ದಾರೆ.

Read More

ಬಂಟ್ವಾಳ: ಸರಕಾರಿ ಬಸ್ ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರೆ ವಿದ್ಯಾರ್ಥಿನಿಯೋರ್ವಳು ಗಂಭೀರವಾಗಿ ಗಾಯಗೊಂಡ ಘಟನೆ ವಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ವಿದ್ಯಾರ್ಥಿ ಅಲ್ಲಿಪಾದೆ ಪೆರಿಯಾರ್ ದೋಟ ನಿವಾಸಿ ಗೋಪಾಲ ಸಫಲ್ಯ ಅವರ ಪುತ್ರಿ, ವಾಮದಪದವು ಕಾಲೇಜು ವಿದ್ಯಾರ್ಥಿನಿ ಪಲ್ಲವಿ ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಕಡೆಯಿಂದ ಮಂಗಳೂರಿಗೆ ಸಾಗುತ್ತಿದ್ದ ಸರಕಾರಿ ಬಸ್ ಇನ್ನೊಂದು ಬಸ್ ಅನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬಲಭಾಗದಲ್ಲಿ ಬಂದು ಸ್ಕೂಟರ್ ಗೆ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡ ವಿದ್ಯಾರ್ಥಿಯನ್ನು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ಯಾರ್ಥಿನಿ ತಂದೆ ಗೋಪಾಲ ಸಪಲ್ಯ ಅವರು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Read More

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಸ್ವಯಂಪ್ರೇರಿತ ಪಿಐಎಲ್ ವಿಚಾರಣೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿಂದ ನೋಟಿಸ್ ಜಾರಿ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 15 ಸಾವಿರಕ್ಕೂ ಹೆಚ್ಚು ವೈದ್ಯ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. 454 ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು ಇಲ್ಲ. 723 ಎಂಬಿಬಿಎಸ್ ವೈದ್ಯರ ಕೊರತೆ ಇದೆ. 7492 ನರ್ಸ್ ಗಳು, 1517 ಲ್ಯಾಬ್ ಟೆಕ್ನಿಷಿಯನ್, 1512 ಫಾರ್ಮಾಸಿಸ್ಟ್ ಕೊರತೆ ಇದೆ. 1752 ಅಟೆಂಡರ್, 3253 ಗ್ರೂಪ್ ಡಿ ನೌಕರರ ಕೊರತೆ ಇದೆ. ಕರ್ನಾಟಕದ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಮೂಲ ಸೌಕರ್ಯ ಕೊರತೆ ಇದೆ. ಈ ಸಂಬಂಧ ಎಫ್.ಕೆ.ಸಿ.ಸಿ.ಐ. ವರದಿ ಬಿಡುಗಡೆ ಮಾಡಿತ್ತು. ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೆ ಆದೇಶ ನೀಡಲಾಗಿದೆ.

Read More

ಮಂಗಳೂರು: “ಜನವರಿ 11ರಂದು ಸಂಜೆ 5 ಗಂಟೆಗೆ ಅಡ್ಯಾರ್ ಗಾರ್ಡನ್ ನಲ್ಲಿ ಜನಮೆಚ್ಚುಗೆ ಪಡೆದಿರುವ “ಶಿವದೂತೆ ಗುಳಿಗೆ” ನಾಟಕದ 555ನೇ ಪ್ರದರ್ಶನದ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಕೊಪ್ಪ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಅವರು ದೀಪ ಪ್ರಜ್ವಲನೆಗೈಯಲಿದ್ದಾರೆ” ಎಂದು ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. “ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪರಮಾನಂದ ಸಾಲಿಯಾನ್ ಅವರಿಗೆ ದಿ. ವನಿತಾ ಆನಂದ ಶೆಟ್ಟಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಹಿರಿಯ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಖ್ಯಾತ ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ನಿರೂಪಕಿ ಅನುಶ್ರೀ ಉಪಸ್ಥಿತರಿರಲಿದ್ದಾರೆ. ಅಧ್ಯಕ್ಷತೆಯನ್ನು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ವಹಿಸಲಿದ್ದು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡ, ಆರ್.ಕೆ. ನಾಯರ್, ಪದ್ಮರಾಜ್ ಆರ್., ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ಬಿ. ನಾಗರಾಜ್…

Read More

ಉಡುಪಿ: ಆತ್ರಾಡಿ ಪರೀಕ ನಿವಾಸಿ, ಹೊಟೇಲ್ ಮ್ಯಾನೇಜರ್ ಓರ್ವರು ಹೃದಯಾಘಾತದಿಂದ ನಿಧನರಾದ ಘಟನೆ ನಿನ್ನೆ ರಾತ್ರಿ ನಡೆದಿದೆ.  ಮಂಗಳೂರಿನ ಹೆಸರಾಂತ ಹೊಟೇಲ್ ಒಂದರ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ ಶೆಟ್ಟಿ(28) ಅವರಿಗೆ ಸೋಮವಾರ ರಾತ್ರಿ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ  ಮಹೇಶ್ ಶೆಟ್ಟಿ ಮೃತಪಟ್ಟರು. ಮಹೇಶ್ ಶೆಟ್ಟಿ ಆತ್ರಾಡಿಯಲ್ಲಿ ಡ್ಯಾನ್ಸ್ ಕ್ರಿವ್ ಎಂಬ ನೃತ್ಯ ತರಬೇತಿ ಸಂಸ್ಥೆ ನಡೆಸುತ್ತಿದ್ದರು. ಇತ್ತೀಚೆಗೆ ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ ಮುಗಿಸಿದ್ದ ಮಹೇಶ ಶೆಟ್ಟಿ ಉಡುಪಿ, ಮಂಗಳೂರಿನ ಹೊಟೇಲ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ನಿನ್ನೆಯಷ್ಟೇ ಡ್ಯಾನ್ ಕ್ಲಾಸ್‌ಅನ್ನು ಮತ್ತೆ ಮುನ್ನಡೆಸುವ ಬಗ್ಗೆ ಮಹೇಶ ಶೆಟ್ಟಿ ವಾಟ್ಸ್‌ಅಪ್ ಸ್ಟೇಟಸ್ ಹಾಕಿದ್ದರು ಎನ್ನಲಾಗಿದೆ. ಪರೀಕ ಮಹಾಲಿಂಗೇಶ್ವರ ಭಜನಾ ಮಂಡಳಿಯ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಮಹೇಶ್ ಶೆಟ್ಟಿ ಅವರು ಆತ್ರಾಡಿ lಹಾಗೂ ಪರ್ಕಳ ಪರಿಸರದಲ್ಲಿ ನೃತ್ಯ ತರಬೇತಿ ನೀಡಿ ಹಲವಾರು ಗ್ರಾಮೀಣ ಮಕ್ಕಳನ್ನು ರಂಗಕ್ಕೆ ಪರಿಚಯ ಮಾಡಿರುತ್ತಾರೆ. ಮೃತ ಮಹೇಶ್ ಶೆಟ್ಟಿ ತಂದೆ, ತಾಯಿ, ಓರ್ವ…

Read More

ಮಂಗಳೂರು: “ಜನವರಿ 10ರಂದು ನಗರದ ಪುರಭವನದಲ್ಲಿ ಶ್ರೀ ಲಲಿತೆ ಕಲಾವಿದರು ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ತ್ರಿರಂಗ ಸಂಗಮ ಮುಂಬೈ ಸಂಚಾಲಕತ್ವದಲ್ಲಿ ಗರುಡ ಪಂಚಮಿ 50ರ ಪ್ರದರ್ಶನದ ಸಂಭ್ರಮ ಹಾಗೂ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳರಿಗೆ ರಂಗ ಕಲಾಬಂಧು ಬಿರುದು ಪ್ರದಾನ ನಡೆಯಲಿದೆ” ಎಂದು ತಂಡದ ಸಂಚಾಲಕ ಲಯನ್ ಡಿ. ಕಿಶೋರ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಅನಂತ ಪದ್ಮನಾಭ ಅಸಣ್ಣ ವಹಿಸಲಿದ್ದು, ಮೇಯರ್ ಸುಧೀರ್ ಶೆಟ್ಟ ಕಣ್ಣೂರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತುಳು ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಕಾರ್ಯದರ್ಶಿ ಪುರುಷೋತ್ತಮ್ ಭಂಡಾರಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಕೋಶಾಧಿಕಾರಿ ಸಿಎ ಸುದೇಶ್ ರೈ, ಜನನಿ ಕನ್ ಸ್ಟ್ರಕ್ಷನ್ ಮಾಲಕ ಸುಧಾಕರ್ ಪೂಂಜ, ಹೋಟೆಲ್ ಉದ್ಯಮಿ ಶಶಿಕಾಂತ ಶೇಖ, ಲ. ಚಂದ್ರಹಾಸ್ ಶೆಟ್ಟಿ, ಲೀಲಾಕ್ಷ…

Read More

ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಮನೆಯಲ್ಲಿ ಕಳ್ಳತನವಾಗಿದ್ದು, ಈ ಬಗ್ಗೆ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗುರುಕಿರಣ್ ಅತ್ತೆ ಕಸ್ತೂರಿ ಶೆಟ್ಟಿ ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಾಗಿದೆ. 31-12-2023 ರ ಮಧ್ಯಾಹ್ನ ಬೀರುವಿನಲ್ಲಿ ಕಸ್ತೂರಿ ಶೆಟ್ಟಿ 2.05 ಲಕ್ಷ ಹಣ ಇಟ್ಟಿದ್ರಂತೆ. ಜನವರಿ 5ರಂದು ಬೀರು ಚೆಕ್ ಮಾಡಿದಾಗ ಹಣ ಇರಲಿಲ್ಲ. ಎರಡು ದಿನಗಳ ಕಾಲ ಮನೆಯಲ್ಲೆಲ್ಲ ಹುಡುಕಾಡಿದ್ರೂ ಹಣ ಸಿಕ್ಕಿಲ್ಲ. ಹೀಗಾಗಿ ಜನವರಿ 7ರಂದು ಚಂದ್ರಾ ಲೇಔಟ್ ಠಾಣೆಗೆ ಗುರುಕಿರಣ್ ಅತ್ತೆ ದೂರು ನೀದ್ದಾರೆ. ಕಳೆದ ಆರು ತಿಂಗಳಿಂದ ರತ್ನಮ್ಮ ಎಂಬುವರು ಮನೆ ಕೆಲಸಕ್ಕೆ ಬರ್ತಿದ್ದಾರೆ. ರೂಮ್‌ಗೆ ರತ್ನಮ್ಮ ಬಿಟ್ಟು ಬೇರೆ ಯಾರೂ ಕೂಡ ಬಂದಿಲ್ಲ. ಮನೆ ಕೆಲಸದಾಕೆ ರತ್ನಮ್ಮಳೇ ಹಣ ಕದ್ದಿರಬಹುದು ಅಂತಾ ಕಸ್ತೂರಿ ದೂರು ನೀಡಿದ್ದಾರೆ. ಸದ್ಯ ಚಂದ್ರಲೇಔಟ್ ಪೊಲೀಸ್ರು ಮನೆ ಕೆಲಸದಾಕೆ ರತ್ನಮ್ಮಳ ವಿಚಾರಣೆ‌ ನಡೆಸುತ್ತಿದ್ದಾರೆ.

Read More