Author: curiouslabs

ಉಪ್ಪಿನಂಗಡಿ: ಮನೆಯ ಶೆಡ್ಡ್‌ನಲ್ಲಿ ನಿಲ್ಲಿಸಿದ್ದ ದ್ವಿಚಕ್ರವಾಹನಕ್ಕೆ ಯಾರೋ ಕಿಡಿಕೇಡಿಗಳು ಬೆಂಕಿಹಚ್ಚಿ ನಾಶಪಡಿಸಿದ ಘಟನೆ ಹಿರೆಬಂಡಾಡಿ ಗ್ರಾಮದ ಅಡೆಕಲ್ ಮುಳ್ಳುಗುಡ್ಡೆ ಎಂಬಲ್ಲಿ ನಡೆದಿದೆ. ಬರಿಮಾರು ಗ್ರಾಮ, ಬಂಟ್ವಾಳ ನಿವಾಸಿ ಲಿಖಿತ್‌ ಕುಮಾರ್‌ ಎಂಬವರು ದಿನಾಂಕ: 06-01-2024 ರಂದು ಹಿರೆಬಂಡಾಡಿ ಗ್ರಾಮದ ಅಡೆಕಲ್ ಮುಳ್ಳುಗುಡ್ಡೆ ಎಂಬಲ್ಲಿರುವ ತನ್ನ ಹೆಂಡತಿ ಮನೆಗೆ ಬಂದಿದ್ದು, ರಾತ್ರಿ ವೇಳೆಗೆ ಲಿಖಿತ್‌ ರ ಭಾವ ಕೀರ್ತನ್‌ ಎಂಬವರು ಮನೆಯಿಂದ ಹೊರಗೆ ಹೋದಾಗ, ಮನೆಯಿಂದ ಸುಮಾರು 100 ಮೀಟರ್‌ ದೂರದಲ್ಲಿ ರಸ್ತೆಯಲ್ಲಿ, ಮೋಟಾರು ಸೈಕಲ್‌ವೊಂದು ಬೆಂಕಿಯಿಂದ ಉರಿಯುತ್ತಿರುವುದನ್ನು ಕಂಡು ಮನೆಯವರಲ್ಲಿ ತಿಳಿಸಿದ ವೇಳೆ, ಮನೆಯಿಂದ ಹೊರಗೆ ಹೋಗಿ ನೋಡಿದಾಗ, ಹೆಂಡತಿಯ ಮನೆಯ ಶೆಡ್ಡ್‌ನಲ್ಲಿ ನಿಲ್ಲಿಸಿದ್ದ, ಕೆಎ70-ಜೆ-7206 ನೇ ದ್ವಿಚಕ್ರವಾಹವನ್ನು ಯಾರೋ ವ್ಯಕ್ತಿಗಳು ಅಲ್ಲಿಂದ ಕೊಂಡು ಹೋಗಿ, ಮನೆಯಿಂದ 100 ಮೀಟರ್‌ ದೂರದಲ್ಲಿ ರಸ್ತೆಯಲ್ಲಿ ಬೆಂಕಿಹಚ್ಚಿ ಸುಟ್ಟು ನಾಶಪಡಿಸಿದ್ದು, ಈ ವಾಹನದ ದಾಖಲಾತಿಗಳು ಕೂಡಾ ಇದೇ ವಾಹನದಲ್ಲಿದ್ದು, ಸುಟ್ಟು ಹೋಗಿದ್ದು, ದ್ವಿ ಚಕ್ರ ವಾಹನದ ಅಂದಾಜು ಮೌಲ್ಯ ರೂ 85,000/- ಆಗಬಹುದಾಗಿದೆ. ಘಟನೆಗೆ…

Read More

ಉಡುಪಿ: ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಸಾಹಿತಿ ಪ್ರೊ. ಅಮೃತ ಸೋಮೇಶ್ವರ ರವರ ಶ್ರದ್ಧಾಂಜಲಿ ಕಾರ್ಯಕ್ರಮವು ಉಡುಪಿಯ ಎಂ ಜಿ. ಎಂ ಕಾಲೇಜು ಬಳಿಯಲ್ಲಿರುವ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ಇಂದು (07-01-2024 ) ನಡೆಯಿತು. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು ರವರು ಮಾತನಾಡುತ್ತಾ ಅಮೃತ ಸೋಮೇಶ್ವರ ಅವರು 1935ರ ಸೆಪ್ಟಂಬರ್ 27ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಕೋಟೆಕಾರು ಸಮೀಪದ ಅಡ್ಯ ಎಂಬಲ್ಲಿ ಜನಿಸಿದರು. ತಂದೆ ಚಿರಿಯಂಡ ಮತ್ತು ತಾಯಿ ಅಮುಣಿ. ಮಾತೃಭಾಷೆ ಮಲಯಾಳಂ ಆದರೂ ತುಳು ಹಾಗೂ ಕನ್ನಡದಲ್ಲಿ ಬರೆದರು.ಅಮೃತ ಸೋಮೇಶ್ವರ ಅವರ ಪ್ರಾರಂಭಿಕ ಶಿಕ್ಷಣ ಕೋಟೆಕಾರಿನ ಸ್ಟೆಲ್ಲಾ ಮೇರಿ ಕಾನ್ವೆಂಟ್‌ನಲ್ಲಿ, ಪ್ರೌಢಶಿಕ್ಷಣ ಆನಂದಾಶ್ರಮದಲ್ಲಿ, ಮತ್ತು ಪದವಿ ಶಿಕ್ಷಣ ಮಂಗಳೂರಿನ ಸೇಂಟ್‌ ಅಲೋಷಿಯಸ್‌ ಕಾಲೇಜಿನಲ್ಲಾಯಿತು.ಮದರಾಸು ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದು ತಾವು ಓದಿದ ಅಲೋಷಿಯಸ್‌ ಕಾಲೇಜಿನಲ್ಲಿಯೇ ಅಧ್ಯಾಪಕರಾಗಿ ಸೇರಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.…

Read More

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯಪದವು ಕನ್ನಡ್ಕದಲ್ಲಿ ನಡೆದಿದೆ. ಕನ್ನಡ್ಕ ನಿವಾಸಿ, ಫಿಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೀಕ್ಷಾ (16) ಮೃತ ಯುವತಿ. ದೀಕ್ಷಾ ಮನೆಯ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಇನ್ನು ದೀಕ್ಷಾ ವಾಣಿಜ್ಯ ವಿಭಾಗದಲ್ಲಿ ಕಲಿಯುತ್ತಿದ್ದು, ನಾಳೆ ಅವರಿಗೆ ಲ್ಯಾಬ್ ಪರೀಕ್ಷೆಯಿತ್ತು ಎಂದು ವರದಿಯಾಗಿದೆ. ಈಶ್ವರಮಂಗಲ ಹೊರಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ನಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡಲು ನಾವು ಹಲವಾರು ರೀತಿಯ ತ್ವಚೆ ಉತ್ಪನ್ನಗಳು ಮತ್ತು ಪರಿಹಾರಗಳನ್ನು ಅಳವಡಿಸಿಕೊಳ್ಳುತ್ತೇವೆ. ಆ ಪರಿಹಾರಗಳಲ್ಲಿ, ಹೆಚ್ಚಿನ ಜನರು ತಮ್ಮ ಮುಖದ ಮೇಲೆ ಅಲೋವೆರಾ ಜೆಲ್ ಅನ್ನು ಅನ್ವಯಿಸಲು ಇಷ್ಟಪಡುತ್ತಾರೆ. ಅಲೋವೆರಾ ನಮ್ಮ ಚರ್ಮ ಮತ್ತು ಕೂದಲು ಎರಡಕ್ಕೂ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಅನೇಕ ಜನರು ಪ್ರತಿದಿನ ತಮ್ಮ ಮುಖಕ್ಕೆ ಅಲೋವೆರಾ ಜೆಲ್ ಅನ್ನು ಅನ್ವಯಿಸುತ್ತಾರೆ. ಇದನ್ನು ಅನ್ವಯಿಸಿದ ನಂತರ, ಕೆಲವೇ ದಿನಗಳಲ್ಲಿ ಮುಖದ ಮೇಲೆ ಬದಲಾವಣೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅಲೋವೆರಾ ಜೆಲ್ ಅನ್ನು ಒಂದು ತಿಂಗಳ ಕಾಲ ಪ್ರತಿದಿನ ಅನ್ವಯಿಸಿದರೆ, ಮುಖದ ಮೇಲೆ ಯಾವ ಪರಿಣಾಮ ಕಂಡುಬರುತ್ತದೆ ಎಂದು ಇಲ್ಲಿ ನೋಡೋಣ ಬನ್ನಿ… ಹೈಡ್ರೇಟ್ ಮತ್ತು ಮಾಯಿಶ್ಚರೈಸೇಶನ್ ಅಲೋವೆರಾ ಜೆಲ್ ಚರ್ಮವನ್ನು ಹೈಡ್ರೇಟ್ ಮಾಡಲು ಮತ್ತು ಆರ್ಧ್ರಕಗೊಳಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಚಳಿಗಾಲದಲ್ಲಿ ತ್ವಚೆ ಒಣಗುವ ಜನರು ಇದನ್ನು ಮುಖಕ್ಕೆ ಹಚ್ಚಿಕೊಳ್ಳಬಹುದು. ಇದರೊಂದಿಗೆ ಇದನ್ನು ಹಚ್ಚುವುದರಿಂದ ತ್ವಚೆಯು ತೇವಾಂಶದಿಂದ ಕೂಡಿರುತ್ತದೆ. ಚರ್ಮಕ್ಕೆ ಸಂಬಂಧಿಸಿದ…

Read More

ಭಾರತ ಮೂಲದ ವಿದ್ಯಾರ್ಥಿಯೊಬ್ಬ ಇಟಲಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ರಾಮ್ ರಾವುತ್ ಶವವಾಗಿ ಪತ್ತೆಯಾದ ವಿದ್ಯಾರ್ಥಿ. ರಾಮ್ ರಾವುತ್ ಜ.2 ರಂದು ಸಾವನ್ನಪ್ಪಿದ್ದು, ಪೋಷಕರು ಆತನ ಮೊಬೈಲ್ ಗೆ ಕರೆ ಮಾಡಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ರಾವುತ್ ಎಂಬಿಎ ಓದಲು ಇಟಲಿಗೆ ಹೋಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಹೊಸ ವರ್ಷದ ಶುಭಾಶಯಗಳನ್ನು ತಿಳಿಸಲು ರಾವುತ್ ಅವರ ಪೋಷಕರು ಕರೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಕರೆ ಮಾಡಿದ ವೇಳೆ ಮಗ ಫೋನ್ ಸ್ವೀಕರಿಸಲಿಲ್ಲ. ಆ ಬಳಿಕ ಪೋಷಕರು ರಾವುತ್ ಮನೆಯ ಮಾಲೀಕನಿಗೆ ಕರೆ ಮಾಡಿದ್ದಾರೆ. ಮಾಲೀಕ ಹೋಗಿ ನೋಡಿದಾಗ ರಾವುತ್ ವಾಶ್ ರೂಮ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸಾವಿಗೆ ಕಾರಣ ಏನು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ. ರಾಮ್ ರಾವುತ್ ಅವರ ಕುಟುಂಬವು ಅವರ ದೇಹವನ್ನು ಭಾರತಕ್ಕೆ ತರಲು ಜಾರ್ಖಂಡ್‌ನ ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳನ್ನು ಸಂಪರ್ಕಿಸಿದೆ. ಪಶ್ಚಿಮ ಸಿಂಗ್‌ಭೂಮ್‌ನ ಡೆಪ್ಯುಟಿ ಕಮಿಷನರ್…

Read More

ಕಾಪು ಬೀಚ್‌ನಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನನ್ನು ಬೀಚ್‌ ನಿರ್ವಹಣ ಸಮಿತಿಯ ಲೈಫ್‌ ಗಾರ್ಡ್‌ಗಳು ರಕ್ಷಿಸಿದ ಘಟನೆ ನಡೆದಿದೆ.ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕೋಟೆಪುರಂನ ಕಾಲೇ ಜೊಂದರ ಸುಮಾರು 20-25 ಮಂದಿ ವಿದ್ಯಾರ್ಥಿಗಳ ತಂಡ ಕರಾವಳಿ ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದು, ಶನಿವಾರ ಬೆಳಗ್ಗೆ ಕಾಪು ಬೀಚ್‌ಗೆ ಬಂದಿದ್ದರು. ಬೀಚ್‌ನಲ್ಲಿ ಸಮುದ್ರ ಸ್ನಾನಕ್ಕೆಂದು ಇಳಿದಿದ್ದ ವಿದ್ಯಾರ್ಥಿಗಳ ಪೈಕಿ ಬಾಬು (20) ಸಮುದ್ರದ ಅಲೆಯ ಸುಳಿಗೆ ಸಿಲುಕಿ ಸಮುದ್ರ ಪಾಲಾಗುವ ಭೀತಿ ಎದುರಾಗಿತ್ತು ಎನ್ನಲಾಗಿದೆ.ತಮ್ಮ ತಂಡದ ಸದಸ್ಯ ಸಮುದ್ರದಲ್ಲಿ ಮುಳುಗೇಳುತ್ತಿದ್ದಂತೆಯೇ ಜತೆಗಾರರು ಬೊಬ್ಬೆ ಹಾಕಿದ್ದು, ಬೊಬ್ಬೆಯನ್ನು ಕೇಳಿ ಸ್ಥಳೀಯರು ಮತ್ತು ಬೀಚ್‌ ನಿರ್ವಹಣ ಸಮಿತಿಯ ಲೈಫ್‌ ಗಾರ್ಡ್‌ಗಳು ಸ್ಥಳಕ್ಕೆ ಧಾವಿಸಿದ್ದರು. ಲೈಫ್‌ ಗಾರ್ಡ್‌ಗಳಾದ ಚಂದ್ರಶೇಖರ್‌, ದಾದಾಪೀರ್‌, ಸಂದೇಶ್‌ ಮತ್ತು ಸ್ಥಳೀಯರಾದ ಗೌರವ್‌ ಅವರು ಟ್ಯೂಬ್‌ ಮೂಲಕ ಯುವಕನ ಬಳಿಗೆ ತೆರಳಿ ಅಲೆಗೆ ಸಿಲುಕಿದ್ದ ವಿದ್ಯಾರ್ಥಿಯನ್ನು ರಕ್ಷಿಸಿದ್ದಾರೆ.ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ಯುವಕ ಚೇತರಿಸಿಕೊಂಡ ಬಳಿಕ ವಿದ್ಯಾರ್ಥಿಗಳು ನಿರ್ಗಮಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Read More

ಕಡಬ: ಕೆಎಸ್ಸಾರ್ಟಿಸಿ ಬಸ್ ಕಂಡಕ್ಟರ್ ವೃದ್ಧರೋರ್ವರನ್ನು ಚಿಲ್ಲರೆ ನೀಡಿಲ್ಲವೆಂಬ ಕಾರಣಕ್ಕೆ   ಅರ್ಧ ದಾರಿಯಲ್ಲೇ ಇಳಿಸಿ‌ಹೋದ ಘಟನೆ ಇಂದು ಕಡಬದಲ್ಲಿ ನಡೆದಿದೆ.ಬೆಳಿಗ್ಗೆ 9.30 ಗಂಟೆಗೆ ಕಲ್ಲುಗುಡ್ಡೆಯಿಂದ ಇಚಿಲಂಪಾಡಿ ಮಾರ್ಗವಾಗಿ ಪುತ್ತೂರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್ಸಿಗೆ ಹತ್ತಿದ ಕಲ್ಲುಗುಡ್ಡೆ ನಿವಾಸಿ ವೃದ್ಧರೋರ್ವರು ಕಾಂಚನ ಎಂಬಲ್ಲಿ ಇಳಿಸುವಂತೆ 200 ರೂ. ನೀಡಿದ್ದರು. ಈ ವೇಳೆ ಕಂಡಕ್ಟರ್ ಚಿಲ್ಲರೆ ಕೇಳಿದ್ದು, ವೃದ್ಧರು ಚಿಲ್ಲರೆ ಇಲ್ಲವೆಂದಾಗ ಅರ್ಧ ದಾರಿಲ್ಲೇ ಇಳಿಸಿದ್ದಾನೆ ಎನ್ನಲಾಗಿದೆ.ಕಾಂಚನದಲ್ಲಿ ಇಳಿಯುವ ವೇಳೆ ಚಿಲ್ಲರೆ ನೀಡಿದರೆ ಸಾಕೆಂದು ವೃದ್ಧರು ಮನವಿ ಮಾಡಿಕೊಂಡರಾದರೂ, ಕ್ಯಾರೇ ಎನ್ನದ ಕಂಡಕ್ಟರ್ ಗೋಳಿಯಡ್ಕ ಎಂಬಲ್ಲಿ ಇಳಿಸಿ ಹೋಗಿದ್ದಾನೆ  ಎಂದು ತಿಳಿದು ಬಂದಿದೆ.ಕಂಡಕ್ಟರ್ ನ ಈ ಅಮಾನವೀಯ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More

ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ಬೆಳಗಿನ ಜಾವ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ನಲ್ಲಿ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಶಿರಾಡಿ ಘಾಟ್ ನಲ್ಲಿ ರಸ್ತೆ ಬದಿ ಪಲ್ಟಿಯಾಗಿ ಕಾಂಕ್ರೀಟ್ ತಡೆಗೋಡೆಗೆ ವಾಲಿ ನಿಂತಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದು, ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More

ಉಳ್ಳಾಲ: ಕನ್ನಡ, ತುಳು ಭಾಷೆಯ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ಸಂಶೋಧಕ, ಯಕ್ಷಗಾನ ಪ್ರಸಂಗಕರ್ತ ಅಮೃತ ಸೋಮೇಶ್ವರ (89) ಇಂದು ಬೆಳಗ್ಗೆ 9.15ಕ್ಕೆ ನಿಧನರಾಗಿದ್ದಾರೆ. ಸೋಮೇಶ್ವರ ನಿವಾಸಿಯಾಗಿದ್ದ ಅಮೃತ ಸೋಮೇಶ್ವರ ಅವರು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಕನ್ನಡ ಪ್ರಾಧ್ಯಾಪಕರಾಗಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ವೈವಿಧ್ಯಮಯ ಹಾಗೂ ವಿಸ್ತೃತವಾದ ಸಾಹಿತ್ಯ ಕೃಷಿಯನ್ನು ನಡೆಸಿದ್ದಾರೆ. ಯಕ್ಷಗಾನದ ಬಗ್ಗೆ ವ್ಯಾಪಕ ಸಂಶೋಧನೆ, ಅಧ್ಯಯನ, ಆವಿಷ್ಕಾರ, ಕೃತಿರಚನೆ ಅವರ ಇನ್ನೊಂದು ಪ್ರಮುಖ ಕಾರ್ಯಕ್ಷೇತ್ರವಾಗಿತ್ತು. ಅಮೃತ ಸೋಮೇಶ್ವರ ಇವರ ಪಾರ್ಥೀವ ಶರೀರ ಸಂಜೆ 5 ರ ನಂತರ ಸೋಮೇಶ್ವರ ಶಿವಶಕ್ತಿನಗರದ ‘ ಒಲುಮೆ’ ತಮ್ಮ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. ನಾಳೆ ಮಧ್ಯಾಹ್ನ 11 ರ ವೇಳೆಗೆ ಅಂತಿಮ ಸಂಸ್ಕಾರ ಮಾಡೂರು ಸ್ಮಶಾನದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅಮೃತ ಸೋಮೇಶ್ವರ ಇವರು ತುಳುನಾಡ ರಕ್ಷಣಾ ವೇದಿಕೆಯ ಮಾರ್ಗದರ್ಶಕರಾಗಿದ್ದು ಹಲವಾರು ಬಾರಿ…

Read More

ಮಂಗಳೂರು: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ “ಯುವನಿಧಿ” ಯೋಜನೆಯ ಪದವೀಧರರಿಗೆ ರೂ. 3000 ಹಾಗೂ ಡಿಪ್ಲೋಮಾ ಪಡೆದಿರುವವರಿಗೆ ರೂ. 1500 ನಿರುದ್ಯೋಗ ಭತ್ಯೆ ನೀಡುವ ನೋಂದಣಿ ತೀವ್ರಗೊಳಿಸಲು ಜಿಲ್ಲಾಧಿಕಾರಿ ಎಂಪಿ ಮುಲ್ಲೈಮುಗಿಲನ್ ಸೂಚಿಸಿದ್ದಾರೆ. ಅವರು ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿ, ದ.ಕ ಜಿಲ್ಲೆಯ ಎಲ್ಲಾ ಪದವಿ ಕಾಲೇಜು ಹಾಗೂ ಡಿಪ್ಲೋಮಾ ಶಿಕ್ಷಣ ಸಂಸ್ಥೆಗಳಲ್ಲಿ ಜನವರಿ 8 ಮತ್ತು 9 ರಂದು ನೋಂದಣಿ ಮೇಳವನ್ನು ನಡೆಸಲು ಅವರು ತಿಳಿಸಿದರು.2023ರಲ್ಲಿ ಪದವಿ, ಡಿಪ್ಲೊಮಾ ಪಡೆದವರು ಇದಕ್ಕೆ ಅರ್ಹರಾಗಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಯುವ ನಿಧಿಗೆ ನೋಂದಣಿ ಮಾಡಲು ಹೆಚ್ಚಿನ ಪ್ರತಿಕ್ರಿಯೆ ಕಂಡುಬಂದಿದೆ. ಈ ನಿಟ್ಟಿನಲ್ಲಿ ಕಾಲೇಜುಗಳಲ್ಲಿಯೇ ನೋಂದಣಿ ಅಭಿಯಾನ ನಡೆಸುವಂತೆ ಅವರು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜ, ಮಂಗಳೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ಎ.ಎಂ. ಖಾನ್, ಮತ್ತಿತರರು ಉಪಸ್ಥಿತರಿದ್ದರು.

Read More