Author: curiouslabs

ಉಡುಪಿ: ದಿನಾಂಕ 05.01.2024 ಶುಕ್ರವಾರ ಮಧ್ಯಾಹ್ನ 3:00 ಘಂಟೆಗೆ ಸರಿಯಾಗಿ ತುಳುನಾಡ ರಕ್ಷಣಾ ವೇದಿಕೆ ಕಾಪು ಮಹಿಳಾ ಘಟಕದ ಸಭೆಯನ್ನು ಸುರಭಿ ಹಾಲ್ ನಲ್ಲಿ ಕಾಪು ತಾಲೂಕು ಮಹಿಳಾ ಘಟಕ ಅನುಸೂಯ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ವೀಕ್ಷಕರಾದ ಪ್ರ್ಯಾಂಕಿ ಡಿಸೋಜ ವಹಿಸಿದ್ದರು. ಸಭೆಯಲ್ಲಿ ಸವಿತಾ ನಾಯಕ್, ರೋಷನ್ ಬಲ್ಲಾಳ್, ದೀಪ ಶೆಟ್ಟಿ, ಗುಲಾಬಿ ಶೆಟ್ಟಿ, ನಳಿನಿ, ರೋಹಿಣಿ ಶೆಟ್ಟಿ, ಜಯಲಕ್ಷ್ಮಿ ಹೆಗಡೆ, ಸುನಿತಾ ಶೆಟ್ಟಿ ಸಲಹೆ ಸೂಚನೆಗಳನ್ನು ನೀಡಿ ಮುಂದಿನ ಸಂಘಟನೆ ಬಲ ಪಡಿಸುವ ಮತ್ತು ಮುಂದಿನ ಕಾರ್ಯಕ್ರಮ ಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಮಮತಾ,ವಿನೋದ,ಸುಧಾ ನಾಯಕ್, ಗುಲಾಬಿ, ವಿನೋದ ರವರು ಸೇರ್ಪಡೆಗೊಂಡವರಿಗೆ ಮಹಿಳಾ ಅದ್ಯಕ್ಷೆ ಅನುಸೂಯ ಶೆಟ್ಟಿ ಯವರು ಸಂಘಟನಾ ಶಾಲು ಹಾಕಿ ಸ್ವಾಗತಿಸಿದರು.

Read More

ಉಡುಪಿ: ಹಣ ಹೂಡಿಕೆಯಿಂದ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಬ್ರಿಯ ರಾಘವೇಂದ್ರ(41) ಎಂಬವರಿಗೆ ವಾಟ್ಸಾಪ್‌ಗೆ ಅಪರಿಚಿತ ವ್ಯಕ್ತಿ ಮೊಬೈಲ್ ಸಂದೇಶವೊಂದು ಕಳುಹಿಸಿ, ತಮ್ಮ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಬರುವುದಾಗಿ ತಿಳಿಸಿದ್ದರು. ಇದನ್ನು ನಂಬಿದ ರಾಘವೇಂದ್ರ, ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗೆ ಜ.3ರಂದು ಒಟ್ಟು 18,13,145.90ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿದ್ದರು. ಆದರೆ ಆರೋಪಿಗಳು ಯಾವುದೇ ಲಾಭಾಂಶವನ್ನು ಈವರೆಗೂ ನೀಡದ ಮೋಸ ಮಾಡಿರುವುದಾಗಿ ದೂರಲಾಗಿದೆ.

Read More

ಕಡಬ: ಮನೆಯ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ನಗ, ನಗದನ್ನು ದೋಚಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಠಾಣಾ ವ್ಯಾಪ್ತಿಯ ಆತೂರು ಕೊಯಿಲ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಆತೂರು ಕೊಯಿಲ ಸಮೀಪದ ಕಲಾಯಿ ನಿವಾಸಿ ಯಾಕುಬ್ ಎಂಬವರ ಮನೆಯಲ್ಲಿ ಕಳ್ಳತವಾಗಿದ್ದು, ಮನೆ ಮಂದಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಇನ್ನೊಂದು ಮನೆಯ ಬೀಗ‌ ಮುರಿಯುವ ವೇಳೆ ಆಟೋ ರಿಕ್ಷಾ ಬರುತ್ತಿರುವುದನ್ನು ನೋಡಿದ ಕಳ್ಳರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Read More

ಮಂಗಳೂರು: ನಮ ತುಳುವೆರ್ ಕಲಾ ಸಂಘಟನೆ (ರಿ.) ಮುದ್ರಾಡಿ ಉಡುಪಿ ವತಿಯಿಂದ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಸಹಯೋಗದೊಂದಿಗೆ ದಿನಾಂಕ 2-01-2024ರಂದು ತುಳು ಭವನ ಉರ್ವಸ್ಟೊರ್ ನಲ್ಲಿ ಸುವರ್ಣ ಕರ್ನಾಟಕ ರಂಗ ಅಭಿಯಾನ ಮತ್ತು ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ರಂಗ ನಿರ್ದೇಶಕರಾದ ಶ್ರೀ ನಾ.ದಾಮೋದರ ಶೆಟ್ಟಿ ನೆರವೇರಿಸಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ, ನ್ಯಾಯವಾದಿ ಶಶಿರಾಜ್ ಕಾವೂರು, ಅಖಿಲ ಭಾರತ ತುಳು ಒಕ್ಕೂಟ ಸಂಘಟನಾ ಕಾರ್ಯದರ್ಶಿ ರಾಜೇಶ್ ಆಳ್ವ , ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅದ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ಶ್ರೀ. ಭುವನಬಿರಾಮ ಉಡುಪ ಭಾಗವಹಿಸಿದರು. ಶ್ರೀ ಹರಿಕೃಷ್ಣ ಪುನುರೂರು, ಡಾ. ಮೂಡಂಬೈಲು ರವಿ ಶೆಟ್ಟಿ, ಪಮ್ಮಿ ಕೊಡಿಯಾಲ್ ಬೈಲ್, ಡಾ. ಮಂದಾರ ರಾಜೇಶ್ ಭಟ್, ಶ್ರೀಮತಿ ವಿದ್ಯಾ ಸಂಪತ್ ಕರ್ಕೇರ ಕೊಡಿಕಲ್ ರವರಿಗೆ ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರಧಾನ ಪುರಸ್ಕಾರ ನಡೆಯಿತು. ಸಭಾ…

Read More

ಉಡುಪಿ: ರಿಕ್ಷಾ ಚಾಲಕನಿಗೆ ಹೃದಯಾಘಾತ ಉಂಟಾದ ಪರಿಣಾಮ ಚಲಿಸುತ್ತಿದ್ದ ರಿಕ್ಷಾ ನಿಯಂತ್ರಣ ತಪ್ಪಿ ಅಪಘಾತ ಕ್ಕೀಡಾಗಿ ಇಬ್ಬರು ಪ್ರಯಾಣಿಕರು ಗಾಯಗಳೊಂದಿಗೆ ಪಾರಾದ ಘಟನೆ ಅಜ್ಜರಕಾಡು ಸಮೀಪ ಸಂಭವಿಸಿದೆ. ಹೃದಯಾಘಾತಕ್ಕೀಡಾದ ರಿಕ್ಷಾ ಚಾಲಕ ಕಾಡಬೆಟ್ಟು ನಿವಾಸಿ ಸುರೇಶ್ ಸದ್ಯ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಜ್ಜರಕಾಡು ಕಡೆಯಿಂದ ನಗರದ ಬಸ್ ನಿಲ್ದಾಣಕ್ಕೆ ರಿಕ್ಷಾದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದಾಗ ಚಾಲಕ ಹಠಾತ್ ಕುಸಿದು ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

Read More

ಚಿಕ್ಕಮಗಳೂರು: ಮೂರು ದಶಕಗಳ ಹಿಂದೆ ಬಾಬರಿ ಧ್ವಂಸ ಸಂದರ್ಭ ಹುಬ್ಬಳ್ಳಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಶ್ರೀಕಾಂತ್ ಪೂಜಾರಿ ಎಂಬಾತನನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಮಾಜಿ ಸಚಿವ ಸಿ.ಟಿ.ರವಿ ‘ನಾನೂ ಕರಸೇವಕ, ನನ್ನನ್ನು ಬಂಧಿಸಿ’ ಎಂದು ಬರೆದಿರುವ ಭಿತ್ತಿಪತ್ರ ಹಿಡಿದು ಗುರುವಾರ ಚಿಕ್ಕಮಗಳೂರು ನಗರ ಠಾಣೆ ಎದುರು ಏಕಾಂಗಿ ಧರಣಿ ನಡೆಸಿದರು.ಕೆಲವು ಕಾರ್ಯಕರ್ತರೊಂದಿಗೆ ಆಗಮಿ ಸಿದ ಅವರು ಪೊಲೀಸ್ ಠಾಣೆಯ ಮುಂಭಾಗ ‘ನಾನು ಕ್ರಿ.ಶ.1992 ಡಿ.6ರ ಅಯೋಧ್ಯೆ ಶ್ರೀರಾಮ ಮಂದಿರದ ಕರಸೇವಕ, ನನ್ನನ್ನೂ ಬಂಧಿಸಿ’ ಎಂಬ ಭಿತ್ತಿಪತ್ರವನ್ನು ಹಿಡಿದು ನಗರ ಪೊಲೀಸ್ ಠಾಣೆ ಮುಂಭಾಗ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು. ಠಾಣೆಯ ಗೇಟ್ ಆವರಣದಲ್ಲಿದ್ದ ಕಾರ್ಯಕರ್ತರು ಸಿ.ಟಿ.ರವಿ ಪ್ರತಿಭಟನೆಗೆ ಸಾಥ್ ನೀಡಿದರು.ಈ ವೇಳೆ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆ ವೇಳೆ ಹೆಚ್ಚುವರಿ ಎಸ್ಪಿ ಕೃಷ್ಣ ಮೂರ್ತಿಯವರು ಸಿ.ಟಿ.ರವಿಯನ್ನು ಪೋಲಿಸ್ ಠಾಣೆ ಒಳಗೆ ಕರೆದುಕೊಂಡು ಹೋದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ನಾವೂ ಕರ ಸೇವಕರು,…

Read More

ಮಂಗಳೂರು: ಮನಪಾ ಬೋಳೂರು ವಾರ್ಡ್ ಕಾರ್ಪೊರೇಟರ್ ಜಗದೀಶ್ ಶೆಟ್ಟಿಯವರು ಇಂದು ಸಂಜೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಗರದ ಡಿಸಿ ಆಫೀಸ್ ಬಳಿಯ ತಾಜ್ ಮಂಜೂರಾನ್ ಹೊಟೇಲ್ ಬಳಿಯಲ್ಲಿ ಕಾರಿನಲ್ಲಿಯೇ ಕುಳಿತು ಅವರು ವಿಷ ಸೇವನೆ ಮಾಡಿದ್ದಾರೆ. ವೀಳ್ಯದೆಲೆಗೆ ಸ್ಪ್ರೇ ಮಾಡುವ ರಾಸಾಯನಿಕವನ್ನು ಎರಡು ಸ್ಪೂನ್ ನಷ್ಟು ಸೇವನೆ ಮಾಡಿದ್ದರು ಎಂದು ತಿಳಿದು ಬಂದಿದೆ.. ಜಗದೀಶ್ ಶೆಟ್ಟಿಯವರು ವಿಷ ಸೇವಿಸಿ ಅಸ್ವಸ್ಥರಾಗಿದ್ದನ್ನು ನೋಡಿ ತಕ್ಷಣ ಅಲ್ಲಿದ್ದವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ಸಂದರ್ಭ ಅವರು ಪರಿಸ್ಥಿತಿ ಗಂಭೀರವಾಗಿತ್ತು. ಆದರೆ ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಆದರೆ ಸದ್ಯ ಅವರನ್ನು ಐಸಿಯುನಲ್ಲಿರಿಸಿ ಪರಿಶೀಲನೆ ಮಾಡಲಾಗುತ್ತಿದೆ.

Read More

ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದ್ದು. ಜನವರಿ ತಿಂಗಳಲ್ಲಿ ಬಂದ ಅಕಾಲಿಕ ಮಳೆ ಶುಕ್ರವಾರದವರೆಗೂ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಇಂದು ಮತ್ತು ನಾಳೆ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ.ಅರಬ್ಬಿ ಸಮುದ್ರದಲ್ಲಿ (Arabian Sea) ವಾಯುಭಾರ ಕುಸಿತ ಕಾಣಿಸಿಕೊಂಡಿರುವ ಹಿನ್ನೆಲೆ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ (Rain) ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಗೆ ಇಂದು ಮತ್ತು ನಾಳೆ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಗುಡುಗಿನಿಂದ ಕೂಡಿದ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುರುವಾರ ಬೆಳಿಗ್ಗೆ 8.30ರವರೆಗಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯ‌ ಕೋಡಿಯಲ್ಲಿ 85 ಮಿ.ಮೀ, ಪಾಂಡೇಶ್ವರದಲ್ಲಿ 57, ವಡ್ಡರ್ಸೆಯಲ್ಲಿ 50, ಕರ್ಜೆಯಲ್ಲಿ 41, ಉದ್ಯಾವರದಲ್ಲಿ 39, ಕುಂಬಾಸಿಯಲ್ಲಿ 38, ಬೀಜಾಡಿಯಲ್ಲಿ 37.5, ಕಾಪು ಕೋಟೆಯಲ್ಲಿ ಮತ್ತು ಕೋಟೇಶ್ವರದಲ್ಲಿ 36.5, ವಾರಂಬಳ್ಳಿಯಲ್ಲಿ 35, ದಕ್ಷಿಣ ಕನ್ನಡ ಜಿಲ್ಲೆಯ ಸರಪಾಡಿಯಲ್ಲಿ 54 ಬಳ್ಕುಂಜೆಯಲ್ಲಿ 23 ಮಿ.ಮೀ, ಕಿಲ್ಪಾಡಿಯಲ್ಲಿ 18.5…

Read More

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳ ಬದಿಗಳಲ್ಲಿ ಮತ್ತು ವಿದ್ಯುತ್‌ ಕಂಬಗಳಲ್ಲಿ ಪರವಾನಗಿ ಪಡೆಯದೇ ಕೇಬಲ್ ವಯರ್ ಗಳನ್ನು ಅಳವಡಿಸಿದ್ದರೆ ಎಲ್ಲವನ್ನೂ ತೆರವು ಮಾಡಬೇಕೆಂದು ಪಾಲಿಕೆ ಸೂಚಿಸಿದೆ. ಮಹಾನಗರ ಪಾಲಿಕೆಯ ಅನುಮತಿ ಪಡೆದು ಕೇಬಲ್ ವಯರ್ ಅಳವಡಿಸಿಕೊಂಡಿದ್ದರೆ ಈ ಕೂಡಲೇ ಉಪ ಆಯುಕ್ತರು ಅಥವಾ ಕಂದಾಯ ಅಧಿಕಾರಿಗೆ ಪರವಾನಗಿಯನ್ನು ಪರಿಶೀಲನೆಗೆ ನೀಡಬೇಕು. ಪಾಲಿಕೆಯ ವ್ಯಾಪ್ತಿಯಲ್ಲಿನ ರಸ್ತೆಗಳ ಬದಿಯಲ್ಲಿ ಮಣ್ಣಿನ ಒಳಗೆ ಕೇಬಲ್ ವಯರ್ ಗಳನ್ನು ಅನುಮತಿ ಪಡೆಯದೆ ಅಳವಡಿಸಿಕೊಂಡಿದ್ದರೆ ಅವನ್ನೆಲ್ಲ ನಿರ್ದಾಕ್ಷಿಣ್ಯವಾಗಿ ಪಾಲಿಕೆಯೇ ತೆಗೆದು ಹಾಕಿ ದಂಡ ವಿಧಿಸಲಾಗುವುದು ಎಂದು ಪಾಲಿಕೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Read More

ನವದೆಹಲಿ: ರೈಲ್ವೇ ರಿಕ್ರೂಟ್‌ಮೆಂಟ್ ಬೋರ್ಡ್ (ಆರ್‌ಅರ್‌ಬಿ) ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಅಡಿಯಲ್ಲಿ ಕಾನ್ಸ್‌ಟೇಬಲ್ ಮತ್ತು ಸಬ್ ಇನ್‌ಸ್ಪೆಕ್ಟರ್ (ಎಸ್‌ಐ) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.ಒಟ್ಟು 2,250 ಹುದ್ದೆಗಳಿಗೆ ಆರ್‌ಪಿಎಫ್ ನೇಮಕಾತಿ 2024 ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ 2,000 ಕಾನ್ಸ್‌ಟೇಬಲ್ ಮತ್ತು 250 ಎಸ್‌ಐ ಹುದ್ದೆಗಳು ಸೇರಿವೆ. ಆರ್‌ಅರ್‌ಬಿ ನಿಗದಿಪಡಿಸಿದ ಎಲ್ಲಾ ಅರ್ಹತಾ ಷರತ್ತುಗಳನ್ನು ಪೂರೈಸುವ ಆಸಕ್ತ ಅಭ್ಯರ್ಥಿಗಳು ಆರ್‌ಪಿಎಫ್ ಎಸ್‌ಐ, ಕಾನ್ಸ್‌ಟೇಬಲ್ ನೇಮಕಾತಿ 2024 ಗಾಗಿ rpf.indianrailways.gov.in ನಲ್ಲಿ ಅಧಿಕೃತ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಪರೀಕ್ಷಾ ಪ್ರಾಧಿಕಾರವು ಆರ್‌ಪಿಎಫ್ ಹೊಸ ಖಾಲಿ ಹುದ್ದೆ 2024 ಕುರಿತು ಕಿರು ಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಜಿಯ ದಿನಾಂಕಗಳೊಂದಿಗೆ ವಿವರವಾದ ಅಧಿಸೂಚನೆಯನ್ನು ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಪೋಸ್ಟ್‌ಗಳಿಗೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ ಮತ್ತು ನಂತರ ದಾಖಲೆ ಪರಿಶೀಲನೆ ಮಾಡಲಾಗುತ್ತದೆ. ಆಕಾಂಕ್ಷಿಗಳು 10 ಪ್ರತಿಶತ ಮತ್ತು 15 ಪ್ರತಿಶತ ಖಾಲಿ ಹುದ್ದೆಗಳನ್ನು…

Read More