ಉಡುಪಿ: ದಿನಾಂಕ 05.01.2024 ಶುಕ್ರವಾರ ಮಧ್ಯಾಹ್ನ 3:00 ಘಂಟೆಗೆ ಸರಿಯಾಗಿ ತುಳುನಾಡ ರಕ್ಷಣಾ ವೇದಿಕೆ ಕಾಪು ಮಹಿಳಾ ಘಟಕದ ಸಭೆಯನ್ನು ಸುರಭಿ ಹಾಲ್ ನಲ್ಲಿ ಕಾಪು ತಾಲೂಕು ಮಹಿಳಾ ಘಟಕ ಅನುಸೂಯ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ವೀಕ್ಷಕರಾದ ಪ್ರ್ಯಾಂಕಿ ಡಿಸೋಜ ವಹಿಸಿದ್ದರು.
ಸಭೆಯಲ್ಲಿ ಸವಿತಾ ನಾಯಕ್, ರೋಷನ್ ಬಲ್ಲಾಳ್, ದೀಪ ಶೆಟ್ಟಿ, ಗುಲಾಬಿ ಶೆಟ್ಟಿ, ನಳಿನಿ, ರೋಹಿಣಿ ಶೆಟ್ಟಿ, ಜಯಲಕ್ಷ್ಮಿ ಹೆಗಡೆ, ಸುನಿತಾ ಶೆಟ್ಟಿ ಸಲಹೆ ಸೂಚನೆಗಳನ್ನು ನೀಡಿ ಮುಂದಿನ ಸಂಘಟನೆ ಬಲ ಪಡಿಸುವ ಮತ್ತು ಮುಂದಿನ ಕಾರ್ಯಕ್ರಮ ಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಮಮತಾ,ವಿನೋದ,ಸುಧಾ ನಾಯಕ್, ಗುಲಾಬಿ, ವಿನೋದ ರವರು ಸೇರ್ಪಡೆಗೊಂಡವರಿಗೆ ಮಹಿಳಾ ಅದ್ಯಕ್ಷೆ ಅನುಸೂಯ ಶೆಟ್ಟಿ ಯವರು ಸಂಘಟನಾ ಶಾಲು ಹಾಕಿ ಸ್ವಾಗತಿಸಿದರು.