ಉಡುಪಿ ಜಿಲ್ಲಾ ಘಟಕ ವತಿಯಿಂದ ಮಾರ್ಚ್ 8 ರಂದು ಮಹಿಳಾ ದಿನಾಚರಣೆ ಕಾರ್ಯಕ್ರಮ
ದಿನಾಂಕ 08-03-2024 ರಂದು ಬೆಳ್ಳಿಗೆ 10.30 ಕ್ಕೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ಮಹಿಳಾ ಘಟಕ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಉದ್ಘಾಟನೆ ಯನ್ನು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷ ರಾದ ಯೋಗಿಶ್ ಶೆಟ್ಟಿ ಜಪ್ಪುರವರು ನೆರವೇರಿಸಲಿದ್ದಾರೆ.ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಮಹಿಳಾ ಸಬಲಿಕರಣ, ಸನ್ಮಾನ ಮತ್ತು ಇತರ ಕಾರ್ಯಕ್ರಮ ಜರಗಲಿದೆ. ಜಿಲ್ಲೆಯ ಎಲ್ಲಾ ಮಹಿಳಾ ಪಧಾದಿಕಾರಿಗಳು ಮತ್ತು ಪುರುಷ ಪಧಾದಿಕಾರಿಗಳು ಆಗಮಿಸಿ ಯಶಸ್ವಿ ಗೊಳಿಸಬೇಕಾಗಿ ವಿನಂತಿ. ಕಾರ್ಯಕ್ರಮ ಬಳಿಕ ಸಂಘಟನೆ ಮಹಿಳಾ ಪಧಾದಿಕಾರಿ ರೇಣುಕಾ ರವರ ಮನೆಯ ರೇಣುಕಾ ಯಲ್ಲಮ್ಮ ದೇವರ ಪೂಜಾ ಕಾರ್ಯಕ್ರಮ ದಲ್ಲಿ ಭಾಗವಹಿಸಲಿಕ್ಕಿದೆ. ಎಂದು ಉಡುಪಿ ಮಹಿಳಾ ಜಿಲ್ಲಾದ್ಯಕ್ಷೆ ಶೋಭಾ ಪಾಂಗಳ ರವರ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.