ದಿನಾಂಕ 08-03-2024 ರಂದು ಬೆಳ್ಳಿಗೆ 11 ಗಂಟೆಗೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ಮಹಿಳಾ ಘಟಕ ವತಿಯಿಂದ ವೇದಿಕೆ ಹಮ್ಮಿಕೊಂಡಿದ್ದ “ವಿಶ್ವ ಮಹಿಳಾ ದಿನಾಚರಣೆ” ಉದ್ಘಾಟನೆಯನ್ನು ಮಹಿಳಾ ಜಿಲ್ಲಾದ್ಯಕ್ಷೆ ಶೋಭಾ ಪಾಂಗಳ ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ. ಯೋಗಿಶ್ ಶೆಟ್ಟಿ ಜಪ್ಪು ರವರು ಮಾತನಾಡುತ್ತ “ಮಹಿಳೆಯರ ಹಕ್ಕುಗಳ ಅರಿವಿನ ದಿನವೇ ಮಹಿಳಾ ದಿನ. ಮಹಿಳೆಯರಾದ ನಾವೆಲ್ಲಾ ಈ ದಿನವನ್ನು ಸಂಭ್ರಮಿಸಬೇಕು. ಮಾತೆ ಸಾವಿತ್ರಿಬಾಯಿ ಫುಲೆ ರವರು ಕೊಟ್ಟ ಶಿಕ್ಷಣ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರವರು ಬರೆದ ಸಂವಿಧಾನದಿಂದಾಗಿ ನಾವುಗಳು ಕಲಿಯುತ್ತಿದ್ದೇವೆ ಮೀಸಲಾತಿಯನ್ನು ಅನುಭವಿಸುತ್ತಿದ್ದೇವೆ. ಒಂದು ಹೊತ್ತಿನ ಊಟ ಕಡಿಮೆ ಮಾಡೋಣ. ಆದರೆ ನಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡೋಣ. ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರಿಂದ ನಮ್ಮ ನಮ್ಮ ಕುಟುಂಬಗಳಿಂದ ಹಿಡಿದು ದೇಶವೇ ಸುಧಾರಣೆ ಆಗುತ್ತದೆ. ಪ್ರತಿಯೊಂದು ಮಹಿಳೆಯಲ್ಲೂ ಒಂದೊಂದು ಪ್ರತಿಭೆ ಇರುತ್ತದೆ ಆ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ನಮ್ಮಲ್ಲಿ ಕೆಲವು ಭಾಗದಲ್ಲಿ ಹೆಣ್ಣು ಮಕ್ಕಳಲ್ಲಿ ಹೆಚ್ಚು ಪ್ರತಿಭೆಗಳಿದ್ದರೂ ಮತ್ತೆ ಅವಳು ಮುಸುರೆ ತಿಕ್ಕಬೇಕಾಗುತ್ತಿದೆ. ಗಂಡು ಮಕ್ಕಳು ಎಷ್ಟೇ ದಡ್ಡರಿದ್ದರೂ ಅವರಿಗೆ ಕಲಿಯುವ ಅವಕಾಶ ನೀಡಲಾಗುತ್ತಿದೆ. ಈ ರೀತಿಯ ತಾರತಮ್ಯವನ್ನು ನಿಷೇಧಿಸಬೇಕು. ಹೆಣ್ಣು ಮಕ್ಕಳು ದುರ್ಬಲರಲ್ಲ ಅವರೂ ಕೂಡ ಸಬಲರಾಗಿದ್ದಾರೆ ಎಂದು ಮಹಿಳೆಯರು ಈಗಾಗಲೇ ಹಲವು ಕ್ಷೇತ್ರದಲ್ಲಿ ಸಾಧಿಸಿ ತೋರಿಸಿದ್ದಾರೆ. ಮಹಿಳೆಯರು ಸ್ವಂತ ಉದ್ಯೋಗ ಪ್ರಾರಂಭಿಸುವ ಮೂಲಕ ತನ್ನ ಸಂಸ್ಥೆಯಲ್ಲಿ ಇತರರಿಗೆ ಉದ್ದೋಗ ನೀಡುವ ಮಹತ್ಕರ್ಯ ಮಾಡಬೇಕು ಎಂದು ಹೇಳಿದರು. ಜಿಲ್ಲಾ ವೀಕ್ಷಕರಾದ ಪ್ರ್ಯಾಂಕಿ ಡಿಸೋಜ ಸ್ವಾಗತಿಸಿದರು.
ಜಿಲ್ಲಾದ್ಯಕ್ಷ ಕೃಷ್ಣ ಕುಮಾರ್ ಪ್ರಸ್ತಾವಿಕ ಭಾಷಣ ಮಾಡಿದರು.
ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿಯವರು ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮದಲ್ಲಿ
ನಾಗರಾಜ ಪೂಜಾರಿರವರ ಮಗಳು
ರಾಷ್ಟ ಮಟ್ಟದ ಕ್ರೀಡಾಪಟು ದೀಪ ಶ್ರೀ ಕಾರ್ಕಳ. ದಿವಂಗತ ಗಣೇಶ್ ಶೆಟ್ಟಿಯವರ ಮಗಳು ಕರಾಟೆ ಚಾಂಪಿಯನ್ ರಿಯಾ ಜಿ. ಶೆಟ್ಟಿ ಹಾವಂಜೆ , ನಿವೃತ್ತ ಅಂಗನವಾಡಿ ಶಿಕ್ಷಕಿ ದಮಯಂತಿ ಕಟಪಾಡಿಯವರನ್ನು
ಶಾಲು ಮಾಲೆ ಹಣ್ಣು ಹಂಪಲು ,ಸ್ಮರಣಿಕೆ ನೀಡಿ ಗೌರವಿಸಿ.
ಸನ್ಮಾನಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಅಜರುದ್ದೀನ್ ಸುಬ್ರಹ್ಮಣ್ಯ ನಗರ ರವರು ದನ್ಯವಾದಗೈದರು. ಕಾರ್ಯಕ್ರಮ ದಲ್ಲಿ
ಉಪಾಧ್ಯಕ್ಷರುಗಳಾಗಿ ಜಯ ಪೂಜಾರಿ ಮತ್ತು ಉಮೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿ
ಸುಭಾಷ್ ಸುದಾನ್ , ಕಾಪು ತಾಲೂಕು ಅದ್ಯಕ್ಷ ಹರೀಶ್ ಶೆಟ್ಟಿ ಹಿರಿಯಡ್ಕ ,ಕಾಪು ಮಹಿಳಾ ಅದ್ಯಕ್ಷೆ ಅನುಸೂಯ ಶೆಟ್ಟಿ ,
ಪ್ರೀತಮ್,
ಪೇರ್ಡುರು ಮೊಹಮ್ಮದ್,
ಮಜೀದ್ ,
ಮಹಿಳಾ ಉಪಾಧ್ಯಕ್ಷೆ
ಗುಲಾಬಿ,
ಮಹಿಳಾ ಜೊತೆ ಕಾರ್ಯದರ್ಶಿ ಗುಣವತಿ, ಸಂಘಟನಾ ಕಾರ್ಯದರ್ಶಿ
ಉಷಾ ಹೆಜಾಮಾಡಿ
ಕೋಶಾದಿಕಾರಿ ಸುನಂದ ಕೋಟ್ಯಾನ್ ,
ಹೇಮಾ ನಳಿನಿ ,
ಲಕ್ಷ್ಮಿ ಆದಿ ಉಡುಪಿ,
ನಿರ್ಮಾಲ ಮೆಂಡನ್,
ಸುಕನ್ಯಾ,
ರಂಜೀತಾ ಶೆಟ್ಟಿ , ರೋಹಿಣಿ ಶೆಟ್ಟಿ , ಸವಿತಾ ನಾಯಕ್ ,
ಸುಲತ , ರೋಹಿನಿ , ರವಿಜಾ, ಉಪಸ್ಥಿತರಿದ್ದರು.